About Us
“ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ||”
ಪ್ರಿಯ ಗುರುವೃಂದವೇ, ತಾವುಗಳು ತಮ್ಮ ತಮ್ಮ ತರಗತಿ ಕೋಣೆಗಳಲ್ಲಿ ಈ ದೇಶದ ಭವಿಷ್ಯವನ್ನು ನಿರ್ಮಿಸುತ್ತಿದ್ದೀರಿ, ತಮ್ಮ ಸೇವಾ ಕೈಂಕರ್ಯಕ್ಕೆ ಗೌರವ ಸಮರ್ಪಿಸುವ ರೀತಿಯಲ್ಲಿ ತಮ್ಮ ಸೌಕರ್ಯಕ್ಕಾಗಿ ತಮ್ಮ ವೈಯಕ್ತಿಕ ಸೇವಾ ವಿವರಗಳನ್ನು ಲಭ್ಯವಿರುವ ಆಧುನಿಕ ಸಂಪರ್ಕ ಸಾಧನಗಳನ್ನು ಬಳಸಿಕೊಂಡು ತಮ್ಮ ಅಂಗೈಯಲ್ಲೇ ಅಂದರೆ ತಮ್ಮ ಮೊಬೈಲ್ ನಲ್ಲಿ ಸುರಕ್ಷಿತ ಲಾಗಿನ್ ವಿಧಾನದ ಮೂಲಕ ದೊರಕುವಂತೆ ಮಾಡುವುದು ನಮ್ಮ ಆಶಯ.
ಅದರಲ್ಲೂ ಪ್ರತಿ ತಿಂಗಳ ವೇತನ ವಿವರಗಳನ್ನು ತಿಳಿದುಕೊಳ್ಳಬೇಕೆಂಬ ತಮ್ಮ ಕುತೂಹಲ/ಅಗತ್ಯ ವನ್ನು ಪೂರೈಸುವ ಕಾರ್ಯವನ್ನು ನಾವು ಆಯಾ ವೇತನ ಬಟವಡೆ ಅಧಿಕಾರಿಗಳ ಹಾಗೂ ಶಿಕ್ಷಕ ಸಂಘಟನೆಯ ಸಹಯೋಗದಲ್ಲಿ ಕಳೆದ 6 ವರ್ಷಗಳಿಂದ ರಾಜ್ಯದ ನಾನಾ ತಾಲೂಕುಗಳಲ್ಲಿ ವೇತನ ವಿವರದ ಎಸ್.ಎಂ.ಎಸ್ ಸಂದೇಶಗಳನ್ನು ಪ್ರತಿ ತಿಂಗಳೂ ಶಿಕ್ಷಕ/ಕಿಯರ ಮೊಬೈಲ್ ಗೆ ಕಳುಹಿಸುವ ಮೂಲಕ ನಿರ್ವಹಿಸಿಕೊಂಡು ಬಂದಿದ್ದೇವೆ.
ಈಗಿನ ಸಂದರ್ಭದಲ್ಲಿ ರಾಜ್ಯದ ಬಹುತೇಕ ಶಿಕ್ಷಕರು ಸ್ಮಾರ್ಟ್ ಫೋನ್ ಗಳನ್ನು ಹೊಂದಿ ಇಂಟರ್ನೆಟ್ ಸಂಪರ್ಕ ಹೊಂದಿದ್ದೀರಿ. ಬದಲಾದ ಸನ್ನಿವೇಶದಲ್ಲಿ ಸೌಲಭ್ಯಗಳ ಮೌಲ್ಯವರ್ಧನೆ ಮಾಡಲೋಸುಗ ಶಿಕ್ಷಕ/ಕಿಯರ ಸೇವಾ ವಿವರಗಳಾದ ಪ್ರತಿ ತಿಂಗಳ ವೇತನ ವಿವರ, ಆದಾಯ ತೆರಿಗೆ ಫಾರ್ಮ್-16, ಸೇವಾ ಪುಸ್ತಕದ ಮಾಹಿತಿ, G.P.F. ವಾರ್ಷಿಕ ವರದಿ, ಇಲಾಖಾ ಸುತ್ತೋಲೆಗಳು, ಸೇವೆಗೆ ಸಂಬಂಧಿಸಿದ ವಿವಿಧ ಅರ್ಜಿ ನಮೂನೆಗಳು ಇತ್ಯಾದಿಗಳು ಒಂದೇ ಪೋರ್ಟಲ್ ನಲ್ಲಿ ಲಭ್ಯವಾಗುವಂತೆ ಮಾಡುವುದು ಹಾಗೂ ಅದು ಅತ್ಯಂತ ಸರಳ ಮತ್ತು ಅಷ್ಟೇ ಸುರಕ್ಷಿತ ವಿಧಾನದಲ್ಲಿ ಶಿಕ್ಷಕ/ಕಿಯರು Login ಮೂಲಕ ಅದನ್ನು ಪಡೆಯುವಂತೆ ಮಾಡಲು ಈ ಜಾಲತಾಣವನ್ನು ರೂಪಿಸಲಾಗಿದೆ. ವಿಶೇಷವೆಂದರೆ ಜಾಲತಾಣವು ‘Mobile App’ ರೀತಿಯಲ್ಲಿಯೂ ಲಭ್ಯವಾಗಲಿದೆ. ಈ ಜಾಲತಾಣವು ರಾಜ್ಯದ ಶಿಕ್ಷಕ/ಕಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಹಾಗೂ ಶಿಕ್ಷಕ ಸಂಘಟನೆಗಳು ಈ ಜಾಲತಾಣವನ್ನು ಶಿಕ್ಷಕರಿಗೆ ತಲುಪಿಸುವ ಮಹತ್ಕಾರ್ಯವನ್ನು ಮಾಡುತ್ತೀರಿ ಎಂಬ ಆಶಾಭಾವನೆ ಹೊಂದಿದ್ದೇವೆ.